ಅಸ್ತಮಾ ಕಾಯಿಲೆ: ಭಯ ಬೇಡ, ಮನೆಮದ್ದೇ ಇದಕ್ಕೆ ರಾಮಬಾಣ
ಅಸ್ತಮಾ ಕಾಯಿಲೆ : ಭಯ ಬೇಡ , ಮನೆಮದ್ದೇ ಇದಕ್ಕೆ ರಾಮಬಾಣ ಮಾನವ ತನ್ನಿಂದ ತಾನೇ ಕೆಲವೊಂದು ರೋಗಗಳನ್ನು ಆಹ್ವಾನಿಸಿಕೊಳ್ಳುತ್ತಾನೆ. ಕಾಡುಗಳನ್ನು ಕಡಿದು ಕಾಂಕ್ರೀಟ್ ನಾಡುಗಳನ್ನು ಮಾಡುತ್ತಿರುವ ಕಾರಣದಿಂದಾಗಿ ದೆಹಲಿಯಂತಹ ದೇಶದ ರಾಜಧಾನಿಯಲ್ಲಿ ಈಗ ವಿಷಕಾರಿ ವಾತಾವರಣ ಸೃಷ್ಟಿಯಾಗಿ ಹಲವಾರು ರೀತಿಯ ಕಾಯಿಲೆಗಳು ಸೃಷ್ಟಿಯಾಗಿದೆ. ಕಲುಷಿತ ವಾತಾವರಣದಿಂದ ಬರುವಂತಹ ಪ್ರಮುಖ ಕಾಯಿಲೆಯೆಂದರೆ ಅಸ್ತಮಾ. ಇದು ದೇಹವನ್ನು ತುಂಬಾ ಕಾಡುವಂತಹ ರೋಗ. ಈ ಸಮಸ್ಯೆ ಇರುವವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಾರೆ. ಕೆಲವೊಂದು ಶ್ವಾಸನಾಳಗಳಲ್ಲಿ ಉರಿಯೂತ ಮತ್ತು ಕಿರಿದಾಗಿ ಸಮಸ್ಯೆ ಹೆಚ್ಚಾಗಬಹುದು. ಇದರಿಂದ ಎದೆಕಟ್ಟಿದಂತೆ ಆಗುವುದು, ಉಸಿರಾಟದ ತೊಂದರೆ, ಕಫ, ಉಬ್ಬಸ ಇತ್ಯಾದಿ ಸಮಸ್ಯೆಗಳಿರುವುದು. ಅಸ್ತಮಾ ಇರುವಂತಹ ರೋಗಿಗಳಿಗೆ ಜೀವನವೇ ನರಕವಾಗಿರುವುದು. ನೋವು ಮತ್ತು ಉಸಿರಾಡಲು ಕಷ್ಟಪಡುವುದು ತುಂಬಾ ದೊಡ್ಡ ಸಮಸ್ಯೆಯಾಗಿರುವುದು. ಆದರೆ ಇದಕ್ಕೆ ಕೆಟ್ಟ ಆಹಾರ ಕ್ರಮವೇ ಕಾರಣವೆಂದು ಕೆಲವೊಂದು ಅಧ್ಯಯನಗಳು ಹೇಳಿವೆ. ಅಮೆರಿಕಾದಲ್ಲಿ ಆಹಾರಕ್ರಮ ಬದಲಾವಣೆಯಿಂದಾಗಿ ಅಸ್ತಮಾ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಗಳು ಹೇಳಿವೆ. ಅಮೆರಿಕಾದಲ್ಲಿ ಹೆಚ್ಚಿನ ಜನರು ತಾಜಾ ಹಣ್ಣುಗಳ ಬದಲಿಗೆ ಸಂಸ್ಕರಿಸಿದ ಆಹಾರ ಸೇವನೆಗೆ ಮೊರೆ ಹೋಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಅಸ್ತಮಾಗೆ ಹೆಚ್ಚಿನವರು ಹೋಮಿಯೋಪತಿ ಚಿಕಿತ್ಸೆಯ ಮೊರೆ ಹೋಗಿದ್ದಾರೆ. ಇದ...