Posts

Showing posts with the label ಬೆಳಮುಗಿಲ ಮೋಡಗಳಲಿ

#ಬೆಳಮುಗಿಲ ಮೋಡಗಳಲಿ

ಬೆಳ್ ಮುಗಿಲ ಮೋಡಗಳಲಿ ಹೊಳೆವ ಮಂಜಿನ ಹನಿಗಳು ... ಮನದ ಹೊಳೆಯಲಿ ತೇಲುವಾ ನೆನಪಿನ ಕನವುಗಳು....                               ಬೆಳ್ ಮುಗಿಲ ಮೋಡಗಳಲಿ ಕವನದ ಸಾಲುಗಳು.. ಬರಿಗಣ್ಣಿಗೆ ಕಣಾದ ಕವಲು  ದಾರಿಯಲಿ ಸರಿ ತಪ್ಪುಗಳ ಪಯಣದಲಿ........ತಂಗುದಾಣವ ಹುಡುಕುತ್ತಾ                                  ಬೆಳ್ ಮುಗಿಲ ಮೋಡಗಳಲಿ.... ಆಸರೆಯ ಅಲೆಗಳಲಿ ಗುರಿಯ ಗೋಪುರವ ನೋಡಲು ನಾ ಮುಂದು ತಾ ಮುಂದು ಎಂದು ಬೆಳ್ ಮುಗಿಲ ಮೋಡಗಳು ಬಾನ ಹತ್ತಿರಕೆ  ಹೊಳೆಯುತ್ತಿರೆ ಮನದ ಮೋಡಗಳು  ನಸು ನಾಚಿ                                   ಬೆಳ್ ಮುಗಿಲ ಮೋಡಗಳಲಿ ತುಸು ಮೆಲ್ಲಗೆ ಮನದ ಮಂಜಿನ ಹನಿಗಳು ಕವನದ ಸಾಲಾಗಿ... ಮನದ ಅಗಸದಲಿ ಅಂಬರದ ಹೊಂಗಿರಣದಲಿ ನಂಬಿರದ ಮುಗುಳುನಗೆಯ ಮೌನ...                                 ಬೆಳ್ ಮುಗಿಲ ಮೋಡಗಳಲಿ