ಅಸ್ತಮಾ ಕಾಯಿಲೆ: ಭಯ ಬೇಡ, ಮನೆಮದ್ದೇ ಇದಕ್ಕೆ ರಾಮಬಾಣ

ಅಸ್ತಮಾ ಕಾಯಿಲೆ: ಭಯ ಬೇಡ, ಮನೆಮದ್ದೇ ಇದಕ್ಕೆ ರಾಮಬಾಣ

Image result for asthma images
ಮಾನವ ತನ್ನಿಂದ ತಾನೇ ಕೆಲವೊಂದು ರೋಗಗಳನ್ನು ಆಹ್ವಾನಿಸಿಕೊಳ್ಳುತ್ತಾನೆ. ಕಾಡುಗಳನ್ನು ಕಡಿದು ಕಾಂಕ್ರೀಟ್ ನಾಡುಗಳನ್ನು ಮಾಡುತ್ತಿರುವ ಕಾರಣದಿಂದಾಗಿ ದೆಹಲಿಯಂತಹ ದೇಶದ ರಾಜಧಾನಿಯಲ್ಲಿ ಈಗ ವಿಷಕಾರಿ ವಾತಾವರಣ ಸೃಷ್ಟಿಯಾಗಿ ಹಲವಾರು ರೀತಿಯ ಕಾಯಿಲೆಗಳು ಸೃಷ್ಟಿಯಾಗಿದೆ.
ಕಲುಷಿತ ವಾತಾವರಣದಿಂದ ಬರುವಂತಹ ಪ್ರಮುಖ ಕಾಯಿಲೆಯೆಂದರೆ ಅಸ್ತಮಾ. ಇದು ದೇಹವನ್ನು ತುಂಬಾ ಕಾಡುವಂತಹ ರೋಗ. ಈ ಸಮಸ್ಯೆ ಇರುವವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಾರೆ. ಕೆಲವೊಂದು ಶ್ವಾಸನಾಳಗಳಲ್ಲಿ ಉರಿಯೂತ ಮತ್ತು ಕಿರಿದಾಗಿ ಸಮಸ್ಯೆ ಹೆಚ್ಚಾಗಬಹುದು. ಇದರಿಂದ ಎದೆಕಟ್ಟಿದಂತೆ ಆಗುವುದು, ಉಸಿರಾಟದ ತೊಂದರೆ, ಕಫ, ಉಬ್ಬಸ ಇತ್ಯಾದಿ ಸಮಸ್ಯೆಗಳಿರುವುದು. ಅಸ್ತಮಾ ಇರುವಂತಹ ರೋಗಿಗಳಿಗೆ ಜೀವನವೇ ನರಕವಾಗಿರುವುದು. ನೋವು ಮತ್ತು ಉಸಿರಾಡಲು ಕಷ್ಟಪಡುವುದು ತುಂಬಾ ದೊಡ್ಡ ಸಮಸ್ಯೆಯಾಗಿರುವುದು. ಆದರೆ ಇದಕ್ಕೆ ಕೆಟ್ಟ ಆಹಾರ ಕ್ರಮವೇ ಕಾರಣವೆಂದು ಕೆಲವೊಂದು ಅಧ್ಯಯನಗಳು ಹೇಳಿವೆ.
ಅಮೆರಿಕಾದಲ್ಲಿ ಆಹಾರಕ್ರಮ ಬದಲಾವಣೆಯಿಂದಾಗಿ ಅಸ್ತಮಾ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಗಳು ಹೇಳಿವೆ. ಅಮೆರಿಕಾದಲ್ಲಿ ಹೆಚ್ಚಿನ ಜನರು ತಾಜಾ ಹಣ್ಣುಗಳ ಬದಲಿಗೆ ಸಂಸ್ಕರಿಸಿದ ಆಹಾರ ಸೇವನೆಗೆ ಮೊರೆ ಹೋಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಅಸ್ತಮಾಗೆ ಹೆಚ್ಚಿನವರು ಹೋಮಿಯೋಪತಿ ಚಿಕಿತ್ಸೆಯ ಮೊರೆ ಹೋಗಿದ್ದಾರೆ. ಇದು ಒಳ್ಳೆಯ ಫಲಿತಾಂಶ ಕೂಡ ನೀಡುತ್ತಾ ಇದೆ. ಒಳ್ಳೆಯ ಆಹಾರಕ್ರಮ ಅನುಸರಿಸಿದರೆ ಖಂಡಿತವಾಗಿಯೂ ಒಳ್ಳ ಫಲಿತಾಂಶ ಸಿಗುವುದರಲ್ಲಿ ಸಂಶಯವೇ ಇಲ್ಲ.
ಅಸ್ತಮಾ ಮತ್ತು ಬೊಜ್ಜಿಗೆ ಅವಿನಾಭಾವ ಸಂಬಂಧವಿದೆ. ಅಸ್ತಮಾ ನಿವಾರಣೆ ಮಾಡಲು ತೂಕ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯ. ತೂಕ ಏರಿದರೆ ಅಸ್ತಮಾವು ಹೆಚ್ಚಾಗುವುದು. ಅಸ್ತಮಾ ರೋಗಿಗಳಿಗೆ ಆರೋಗ್ಯಕರ ಆಹಾರ ಕ್ರಮ ಅತೀ ಅಗತ್ಯ. ಈ ಲೇಖನದಲ್ಲಿ ಅಸ್ತಮಾ ರೋಗಿಗಳು ಕೈಗೊಳ್ಳಬೇಕಾದ ಆಹಾರ ಕ್ರಮದ ಬಗ್ಗೆ ಬೋಲ್ಡ್ ಸ್ಕೈ ತಿಳಿಸಿಕೊಡಲಿದೆ...
ತಾಜಾ ಹಣ್ಣುಗಳನ್ನು ಸೇವಿಸಿ
ತಾಜಾ ಹಣ್ಣುಗಳನ್ನು ಸೇವಿಸಿ
ಹಣ್ಣುಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಬೆಟಾ ಕೆರೋಟಿನ್ ಲಭ್ಯವಿದೆ. ಬಾಲ್ಯದಲ್ಲಿ ಹೆಚ್ಚು ಹಣ್ಣುಗಳ ಸೇವನೆ ಮಾಡಿದಂತಹವರಿಗೆ ಜೀವಮಾನವಿಡಿ ಅಸ್ತಮಾ ಕಾಯಿಲೆ ಬರುವ ಸಾಧ್ಯತೆ ತುಂಬಾ ಕಡಿಮೆ. ವಿಟಮಿನ್ ಸಿ ಮತ್ತು ಇ ಅಧಿಕವಾಗಿರುವ ಹಣ್ಣುಗಳೆಂದರೆ ಕಿವಿ ಮತ್ತು ಕಿತ್ತಳೆ ಹಣ್ಣುಗಳು. ಇಂತಹ ಹಣ್ಣುಗಳು ಶ್ವಾಸಕೋಶ ಊತ ಮತ್ತು ಉರಿಯೂತ ಕಡಿಮೆ ಮಾಡುವುದು.
ತಾಜಾ ಮತ್ತು ಹಸಿರೆಳೆ ತರಕಾರಿ ಸೇವಿಸಿ
  
ತಾಜಾ ಮತ್ತು ಹಸಿರೆಳೆ ತರಕಾರಿ ಸೇವಿಸಿ
ತಾಜಾ ಮತ್ತು ಹಸಿರೆಳೆ ತರಕಾರಿಗಳು ಅಸ್ತಮಾ ರೋಗಿಗಳಿಗೆ ಒಳ್ಳೆಯ ಆಹಾರ ಕ್ರಮವಾಗಿದೆ. ಇದರಲ್ಲಿ ಇರುವಂತಹ ಉನ್ನತ ಮಟ್ಟದ ವಿಟಮಿನ್ ಗಳು ಮತ್ತು ಫ್ಲಾವನಾಯ್ಡ್ ಗಳು ದೇಹದಲ್ಲಿರುವ ಫ್ರೀ ರ್ಯಾಡಿಕಲ್ ನ್ನು ಕಡಿಮೆ ಮಾಡುವುದು. ಈ ಫ್ರೀ ರ್ಯಾಡಿಕಲ್ ಗಳು ದೇಹದಲ್ಲಿರುವ ವಿಷಕಾರಿ ಅಂಶಗಳಾಗಿವೆ. ಇವು ಅಸ್ತಮಾದ ಸಮಸ್ಯೆಯನ್ನು ಹೆಚ್ಚಿಸುವುದು.
ಬೀಜಗಳನ್ನು ಸೇವಿಸಿ
  
ಬೀಜಗಳನ್ನು ಸೇವಿಸಿ
ಬೀಜಗಳಲ್ಲಿ ಮೆಗ್ನಿಶಿಯಂ ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಇದರಿಂದ ಇದು ಅಸ್ತಮಾ ರೋಗಿಗಳಿಗೆ ಪರಿಪೂರ್ಣ ಉಪಾಹಾರವಾಗಿದೆ. ಮೆಗ್ನಿಶಿಯಂ ಉಬ್ಬಸವನ್ನು ಕಡಿಮೆ ಮಾಡುವುದು. ವಿಟಮಿನ್ ಇ ಪ್ರತಿರೋಧಕ ಶಕ್ತಿ ಹೆಚ್ಚಳ ಮಾಡುವುದು. ಉರಿಯೂತ ಮತ್ತು ಕೋಶಕ್ಕೆ ಹಾನಿ ಉಂಟುಮಾಡುವಂತಹ ಫ್ರೀ ರ್ಯಾಡಿಕಲ್ ನ್ನು ಇದು ಪರಿಣಾಮಕಾರಿಯಾಗಿ ಕಡಿಮೆ ಮಾಡುವುದು.
ಇಡೀ ಧಾನ್ಯಗಳನ್ನು ಸೇರಿಸಿ
  
ಇಡೀ ಧಾನ್ಯಗಳನ್ನು ಸೇರಿಸಿ
ಇಡೀಯ ಧಾನ್ಯಗಳನ್ನು ಸೇವನೆ ಮಾಡುವುದರಿಂದ ಬಾಲ್ಯದಲ್ಲಿನ ಅಸ್ತಮಾವನ್ನು ಶೇ.50ರಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ಹೇಳಿವೆ.
ದ್ವಿದಳ ಧಾನ್ಯಗಳು
  
ದ್ವಿದಳ ಧಾನ್ಯಗಳು
ದ್ವಿದಳ ಧಾನ್ಯಗಳಲ್ಲಿ ಕಡಿಮೆ ಕ್ಯಾಲರಿ ಮತ್ತು ಕೊಬ್ಬು ಕಡಿಮೆ ಇರುವ ಕಾರಣದಿಂದ ಇದು ಅಸ್ತಮಾದ ರೋಗಿಗಳಿಗೆ ತುಂಬಾ ಪರಿಣಾಮಕಾರಿ ಆಹಾರವಾಗಿದೆ. ದ್ವಿದಳ ಧಾನ್ಯಗಳಲ್ಲಿ ಇರುವಂತಹ ಉನ್ನತ ಮಟ್ಟ ನಾರಿನಾಂಶವು ದೇಹದಲ್ಲಿರುವ ಮೇದಸ್ಸು ಮತ್ತು ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವುದು. ಇದರಿಂದ ಬಾಹ್ಯ ವಸ್ತುಗಳು ಬಂದು ಶ್ವಾಸಕೋಶದ ಸೋಂಕು ಉಂಟು ಮಾಡುವುದನ್ನು ತಡೆಯುವುದು. ದ್ವಿದಳ ಧಾನ್ಯದಲ್ಲಿ ಇರುವಂತಹ ಕೊಬ್ಬು ಕರಗುವ ಕಣಗಳು ಅಸ್ತಮಾದಿಂದ ಉಂಟಾಗುವ ಶೀತ ಮತ್ತು ಜ್ವರವನ್ನು ತಡೆಯುವುದು.
ಲಿಂಬೆ ಜ್ಯೂಸ್ ಕಡೆಗಣಿಸಿ
  
ಆಲಿವ್ ತೈಲ ಮತ್ತು ಒಮೆಗಾ 3 ಕೊಬ್ಬನಾಮ್ಲ
ಒಮೆಗಾ3 ಕೊಬ್ಬಿನಾಮ್ಲವು ಸಾರ್ಡಿನೆಸ್, ಸಾಲ್ಮನ್ ಮತ್ತು ಟ್ಯೂನಾದಂತಹ ಮೀನುಗಳಲ್ಲಿ ಸಮೃದ್ಧವಾಗಿದೆ. ಆಲಿವ್ ಮತ್ತು ಫ್ಲೆಕ್ಸ್ ಬೀಜಗಳಲ್ಲಿಯೂ ಒಮೆಗಾ3 ಕೊಬ್ಬಿನಾಮ್ಲವಿದೆ. ಇದು ಅಸ್ತಮಾ ರೋಗಿಗಳಿಗೆ ತುಂಬಾ ಒಳ್ಳೆಯದು ಎಂದು ಸಾಬೀತಾಗಿದೆ. ಅಸ್ತಮಾ ರೋಗಿಗಳು ಇದನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು.


ಲಿಂಬೆ ಜ್ಯೂಸ್ ಕಡೆಗಣಿಸಿ
ಲಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ ಮತ್ತು ಸ್ವಲ್ಪ ಪ್ರಮಾಣದಲ್ಲಿ ಇದರ ಸೇವನೆ ಮಾಡಿದರೆ ಒಳ್ಳೆಯದು. ಅದಾಗ್ಯೂ, ಲಿಂಬೆ ಜ್ಯೂಸ್ ನ್ನು ಅತಿಯಾಗಿ ಸೇವನೆ ಮಾಡುವುದರಿಂದ ಎದೆಯುರಿಯಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. ಸಲ್ಫೈಟ್ ಮತ್ತು ಸಲ್ಫೈಟ್ ನ ಅಂಶಗಳು ಅಸ್ತಮಾ ಉಂಟು ಮಾಡಬಹುದು. ಲಿಂಬೆಯ ಅಲರ್ಜಿ ಇರುವವರು ಮತ್ತು ಅಸ್ತಮಾ ಸಮಸ್ಯೆಯಿರುವವರು ಲಿಂಬೆಯಿಂದ ಆದಷ್ಟು ದೂರವಿದ್ದರೆ ಒಳ್ಳೆಯದು.
ವೈನ್ ಕಡೆಗಣಿಸಿ
  
ವೈನ್ ಕಡೆಗಣಿಸಿ
ವೈನ್ ನಲ್ಲಿ ಕೂಡ ಕೆಲವೊಂದು ರೀತಿಯ ಸಲ್ಫೈಟ್ ಗಳು ಇರುತ್ತದೆ. ಇದರಿಂದ ಅಸ್ತಮಾದ ಸಾಧ್ಯತೆ ಹೆಚ್ಚು. ಅಸ್ತಮಾ ರೋಗಿಗಳು ವೈನ್ ಸೇವಿಸುವ ಬಗ್ಗೆ ಅಧ್ಯಯನಗಳು ಕೂಡ ಕವಲೊಡೆದಿದೆ. ಇದರಲ್ಲಿನ ಫಲಿತಾಂಶಗಳು ಸ್ಪಷ್ಟವಾಗಿಲ್ಲ. ಇದನ್ನು ಕಡೆಗಣಿಸಿದರೆ ಒಳ್ಳೆಯದು.
  
ಅತಿಯಾಗಿ ಹಾಲು ಸೇವಿಸಬೇಡಿ
ಅಸ್ತಮಾ ರೋಗಿಗಳು ಹಾಲು ಸೇವಿಸುವ ಬಗ್ಗೆ ಗೊಂದಲಗಳು ಇವೆ. ಹಾಲಿನಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ. ಇದರಿಂದ ಅಸ್ತಮಾದ ಲಕ್ಷಣಗಳು ಕಡಿಮೆಯಾಗುವುದು. ಆದರೆ ಕೆಲವರಿಗೆ ಅಸ್ತಮಾದ ಅಲರ್ಜಿ ಇರುವುದು. ಇದರಿಂದ ಉಬ್ಬಸ, ಕಫ ಮತ್ತು ಶ್ವಾಸಕೋಶ ಇತರ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಯಾವುದೇ ರೀತಿಯ ಆಹಾರ ಸೇವನೆ ಮಾಡುವ ಬದಲು ಅದರ ಸುರಕ್ಷತೆ ಕಡೆ ಗಮನಹರಿಸಬೇಕು. ಅಸ್ತಮಾ ರೋಗಿಗಳು ಅಲರ್ಜಿ ಉಂಟು ಮಾಡುವ ಆಹಾರಗಳಿಂದ ದೂರವಿದ್ದು, ಅವುಗಳನ್ನು ಕಡೆಗಣಿಸಬೇಕು.
ಅತಿಯಾಗಿ ಮೊಟ್ಟೆ ಸೇವಿಸಬೇಡಿ
  
ಅತಿಯಾಗಿ ಮೊಟ್ಟೆ ಸೇವಿಸಬೇಡಿ
ಅಸ್ತಮಾಗೆ ಮೊಟ್ಟೆಯು ಒಂದು ಕಾರಣವಾಗಿದೆ. ಅದರಲ್ಲೂ ಅಸ್ತಮಾದಿಂದ ಬಳಲುತ್ತಿರುವ ಮಕ್ಕಳಿಗೆ ಇದು ತುಂಬಾ ಮಾರಕ. ಇದರಿಂದ ಮೊಟ್ಟೆಯ ಮತ್ತು ಮೊಟ್ಟೆಯ ಉತ್ಪನ್ನಗಳನ್ನು ಕಡೆಗಣಿಸಿದರೆ ಒಳ್ಳೆಯದು.
ಹಾಗಲಕಾಯಿ-ಜೇನಿನ ಜೋಡಿ
  
ಹಾಗಲಕಾಯಿ-ಜೇನಿನ ಜೋಡಿ
ಹಾಗಲಕಾಯಿ ಅಸ್ತಮಾಗೆ ಮತ್ತೊಂದು ಪರಿಣಾಮಕಾರಿ ಮದ್ದು. ಜೇನಿನೊಂದಿಗೆ ಹಾಗಲಕಾಯಿ ಪೇಸ್ಟ್, ತುಳಸಿ ಎಲೆ ರಸ ಸೇರಿಸಿ ಕುಡಿಯುವುದರಿಂದ ಅಲರ್ಜಿ ನಿವಾರಿಸಿ ಅಸ್ತಮಾ ಬರುವುದನ್ನೂ ತಡೆಗಟ್ಟುತ್ತದೆ.
ಜೇನು
  
ಜೇನು
ಜೇನನ್ನು ಅಸ್ತಮಾಗೆ ಉತ್ತಮ ಮನೆಮದ್ದಾಗಿ ಉಪಯೋಗಿಸಲಾಗುತ್ತೆ. ಅಸ್ತಮಾ ಕಾಣಿಸಿಕೊಂಡಾಗ ಬಿಸಿ ನೀರಿನಲ್ಲಿ ಜೇನನ್ನು ಹಾಕಿ ಅದರ ಆವಿಯನ್ನು ತೆಗೆದುಕೊಂಡರೆ ಬೇಗನೆ ಪರಿಣಾಮ ಬೀರುತ್ತದೆ. ಒಂದು ಲೋಟ ನೀರಿಗೆ ಒಂದು ಚಮಚ ಜೇನು ಬೆರೆಸಿ ಅದನ್ನು ದಿನಕ್ಕೆ ಮೂರು ಬಾರಿ ಕುಡಿದರೆ ಅಸ್ತಮಾ ನಿಯಂತ್ರಿಸಬಹುದು.
ಮಾವಿನ ಎಲೆಗಳು
  
ಮಾವಿನ ಎಲೆಗಳು
ಕೆಲವು ಎಳೆಯ ಮಾವಿನ ಎಲೆಗಳನ್ನು ಕೊಂಚ ಜಜ್ಜಿ ಮುಳುಗುವಷ್ಟು ನೀರಿನಲ್ಲಿ ಕುದಿಸಿ. ಬಳಿಕ ಈ ನೀರನ್ನು ಸೋಸಿ ತಣಿಸಿ ಸಂಗ್ರಹಿಸಿ. ಈ ನೀರನ್ನು ಸೋಂಕಿರುವ ಸಮಯದಲ್ಲಿ ಸೇವಿಸುತ್ತಾ ಬನ್ನಿ. ಇನ್ನೊಂದು ವಿಧಾನದಲ್ಲಿ ಎಳೆಯ ಮಾವಿನ ಎಲೆಗಳನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿಮಾಡಿ ಬಾಟಲಿಯಲ್ಲಿ ಸಂಗ್ರಹಿಸಿ. ಅನಾರೋಗ್ಯದ ಸಮಯದಲ್ಲಿ ಈ ಪುಡಿಯನ್ನು ಒಂದು ಲೋಟ ನೀರಿಗೆ ಒಂದು ಚಮಚದಷ್ಟು ಸೇರಿಸಿ ಕಲಕಿ ಕುಡಿಯಿರಿ. ಇನ್ನೂ ಉತ್ತಮ ವಿಧಾನವೆಂದರೆ ಎಳೆಯ ಎಲೆಗಳನ್ನು ಹಸಿಯಾಗಿ ಜಗಿದು, ಕೊಂಚ ಒಗರಾಗಿದ್ದರೂ ಸಹಿಸಿ ನುಂಗಿಬಿಡಿ.
ಮೂಲಂಗಿ-ಜೇನು-ನಿಂಬೆರಸ
  
ಮೂಲಂಗಿ-ಜೇನು-ನಿಂಬೆರಸ
ಒಂದು ಕಪ್ ತುರಿದ ಮೂಲಂಗಿ, ಒಂದು ಚಮಚ ಜೇನು ಮತ್ತು ಒಂದು ಚಮಚ ನಿಂಬೆರಸ ಸೇರಿಸಿ 20 ನಿಮಿಷ ಕಾಯಿಸಿ ಇದನ್ನು ದಿನವೂ ಒಂದು ಚಮಚ ಸೇವಿಸುತ್ತಾ ಬಂದರೆ ಪರಿಣಾಮಕಾರಿಯಾಗಿ ಅಸ್ತಮಾ ನಿವಾರಿಸುತ್ತೆ.
ಮೆಂತೆ ಕಾಳು
  
ಮೆಂತೆ ಕಾಳು
ಮೆಂತೆ ಕಾಳಿನಲ್ಲಿ ಅಲರ್ಜಿ ನಿವಾರಿಸಬಲ್ಲ ಶಕ್ತಿಯಿದೆ. ನೀರಿನೊಂದಿಗೆ ಮಂತೆ ಕಾಳು ಬೇಯಿಸಿ ಅದಕ್ಕೆ ಒಂದು ಚಮಚ ಜೇನು ಮತ್ತು ಶುಂಠಿ ರಸದೊಂದಿಗೆ ಬೆರೆಸಿ ದಿನಕ್ಕೊಮ್ಮೆ ಸೇವಿಸಿದರೆ ಅಸ್ತಮಾ ಕಡಿಮೆಮಾಡಬಹುದು.